NEW

HEARTY WELCOME TO ALL VIEWERS .....!!! HEARTY WELCOME TO ALL VIEWERS .....!!!

LATEST NEWS

Thursday 3 July 2014

“ಶಾಲೆಗಳಿಗೆ ಆಧುನಿಕ ಸಂವಹನ ವ್ಯವಸ್ಥೆ ಅಗತ್ಯ: ಕೈಲಾಸ ಮೂರ್ತಿ”

ಶಾಲೆಗಳು ಹೆಚ್ಚು ಹೆಚ್ಚು ಸಮಾಜಮುಖಿಯಾಗುತ್ತಿವೆ. ಶಾಲೆಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಾಹ್ಯ ಪರಿಸರವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬ್ಲಾಗ್ ಒಂದು ಪ್ರಭಾವಿ ಮಾಧ್ಯಮವಾಗಿ ಬೆಳೆಯುತ್ತಿದೆ. ಕಾಸರಗೋಡಿನ ಎಲ್ಲ ಶಾಲೆಗಳಿಗೂ ಬ್ಲಾಗ್ ತಯಾರಿಸುವ ಈ ಯೋಜನೆ ಯಶಸ್ವಿಯಾಗಲಿ ಎಂದು ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಕೈಲಾಸಮೂರ್ತಿ ಅಭಿಪ್ರಾಯಪಟ್ಟರು. ಅವರು 03.07.2014 ಗುರುವಾರ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಬ್ಲೆಂಡ್ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಯೋಜನೆಯ ಮೂಲಕ ಕಾಸರಗೋಡಿನ ಎಲ್ಲ ಶಾಲೆಗಳನ್ನೂ ಬ್ಲಾಗ್ ಮೂಲಕ ಪರಸ್ಪರ ಸಂಪರ್ಕಗೊಳಿಸುವ ಯೋಜನೆಗೆ ಚಾಲನೆ ದೊರೆತಿದೆ.

ಶಾಲಾ ಶಿಕ್ಷಕರಾದ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ತರಬೇತಿಯ ನೇತೃತ್ವ ವಹಿಸಿದ ಡಯಟ್ ಮಾಯಿಪ್ಪಾಡಿಯ ವೇಣುಗೋಪಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಅನಿಲ್ ಕುಮಾರ್ ಮತ್ತು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಶಿಕ್ಷಕ ರವಿಶಂಕರ ದೊಡ್ಡಮಾಣಿ ಉಪಸ್ಥಿತರಿದ್ದರು.

ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಶಿಕ್ಷಕ ಮನೋಜ್ ಸ್ವಾಗತಿಸಿದರು. ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.

No comments:

Post a Comment